Tuesday, March 15, 2011

2011/3/12 bharthi k

Goowdare nanage kelavu kannadadavara addres kalisikodalu aaguttadeyee? kannadadalli bareyalu aaguttilla. mundinasaari bareuttene.


60 ರ ಆಸುಪಾಸಿನಲ್ಲಿರುವ ನನ್ನ ಗೆಳೆಯನ ಅಮ್ಮ ಈಗ ಅಂತರ್ಜಾಲದಲ್ಲಿ ಆಸಕ್ತಿ ತೋರುತಿದ್ದಾರೆ. ಅವರಿಂದ ನನಗೆ ಮೇಲಿನ ಈ-ಪತ್ರ ಬಂದಿದ್ದು ನೋಡಿ ತುಂಬಾ ಸಂತೋಷವಾಯ್ತು. ಈ ಇಳಿ ವಯಸ್ಸಿನಲ್ಲೂ ಅವರ ಕಲಿಯುವ, ಓದುವ ಹಾಗು ತಮ್ಮ ಜೀವನದ ಅನುಭವಗಳನ್ನು ಹಂಚಿ ಕೊಳ್ಳುವ ಆಸಕ್ತಿ ಮೂರ್ಖರ ಪೆಟ್ಟಿಗೆಯ ಮುಂದೆ ಕಾಲ ಕಳೆಯುವ ಯುವ ಪೀಳಿಗೆಯನ್ನು ನಾಚಿಸುವಂತಿದೆ.
ಅವರಿಗೆ ನಾನು ಕೊಟ್ಟ ಉತ್ತರದ ಒಕ್ಕಣೆ ಕೆಳಗಿದೆ. ಇದನ್ನು ಓದಿದ ಮೇಲೆ ನಿಮಗೆ ತಿಳಿದ ಒಳ್ಳೆಯ ಕನ್ನಡದ ಬ್ಲಾಗ್ ಗಳ ಲಿಂಕ್ ಗಳನ್ನು ನಮಗೆ ತಿಳಿಸಿ. ಮುಖ್ಯವಾಗಿ ಅವರಿಗೆ ಆಧ್ಯಾತ್ಮಿಕ ಹಾಗು ಧಾರ್ಮಿಕ ವಿಷಯಗಳ ಮೇಲಿನ ಲಿಂಕ್ ಗಳನ್ನು ಕಳಿಸಿ.


"ನಮಸ್ಕಾರ ಆಂಟಿ,

ನಿಮ್ಮ ಈ-ಪತ್ರ ನೋಡಿ ತುಂಬಾ ಖುಷಿಯಾಯ್ತು.
ನಿಮಗೆ ನನಗೆ ತಿಳಿದಿರುವ ಒಂದೆರೆಡು ಒಳ್ಳೆ ಕನ್ನಡ ಈ-ಅಂಕಣಗಳ (ಬ್ಲಾಗ್ಸ್) ಕೊಂಡಿಗಳನ್ನು(ಲಿಂಕ್ಸ್ - links) ಕೆಳಗೆ ಲಗತಿಸಿದ್ದೇನೆ.

http://kannadablogs.ning.com/
http://www.hpnadig.net/blog/index.php/archives/2004/10/25/more-kannada-websites-on-the-net-updated/
http://kannadakavanagalunayanarayasam.blogspot.com/2011/02/my-1st-poem-published-in-prajavani.html

ಮೊದಲನೆಯದು, ಕನ್ನಡದಲ್ಲಿ ಅಂತರ್ಜಾಲದಲ್ಲಿ ಅಂಕಣ ಬರೆಯುವವರ ಕೊಂಡಿಗಳ ವಿವರವಿದೆ. ನೀವು ಅವುಗಳಿಂದ ನಿಮ್ಮ ಅಭಿರುಚಿಗೆ ಹೊಂದಿಕೆಯಾಗುವ ಅಂಕಣಕಾರರ ಚಿಂತನೆಗಳನ್ನು ಓದಬಹುದು.
ಎರಡನೆಯದರಲ್ಲಿ, ಕನ್ನಡದ ಬಗ್ಗೆ ಅಂತರ್ಜಾಲದಲ್ಲಿ ಎಲ್ಲಾ ರೀತಿಯ ಮಾಹಿತಿಗಳು ಸಿಗುವ ತಾಣಗಳ ವಿವರ ಹಾಗು ಕೊಂಡಿಗಳು.
ಮೂರನೆಯದು, ಒಬ್ಬ ನವ ಕವಿಯಿತ್ರಿಯ (ಸಾಫ್ಟ್ವೇರ್ ಇಂಜಿನಿಯರ್) ಬ್ಲಾಗ್ ಲಿಂಕ್. ಈಕೆಗೆ 2010 ರ ಉತ್ತಮ ಕವಿಯಿತ್ರಿ ಹಾಗು ಉದಯೋನ್ಮುಖ ಕವಿಯಿತ್ರಿ ಎಂದು ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.

ಇನ್ನೂ ಇತರೆ ವಿಚಾರಗಳನ್ನು ಮುಂದಿನ ಈ-ಪತ್ರದಲ್ಲಿ ತಿಳಿಸುವೆ.

ಇಂತಿ ನಿಮ್ಮ,
ಸೋಮಶೇಖರ"

No comments: